ಗುರುವಾರ, ಜನವರಿ 8, 2009

ಕನ್ನಡ ಸಾಹಿತ್ಯ ಸಮ್ಮೇಳನ ಸಂಭ್ರಮ - 75

ಕನ್ನಡ ಸಾಹಿತ್ಯ ಸಮ್ಮೇಳನ 75ರ ಸಂಭ್ರಮ. ಬಂಡೆ ಬೆಟ್ಟಗಳ ತವರಿನಲ್ಲಿ ವಿಜೃಂಭಿಸುತ್ತಿರುವುದು ನಿಜಕ್ಕೂ ಸಂತಸದ ವಿಷಯವೇ ಸೈ. ಸಾಹಿತ್ಯ ಮಲೆನಾಡ ಸಿರಿ ಇದರ ಕಂಪು ಮಲೆನಾಡಿಗೆ ಬಹುಪಾಲು ಸೀಮೀತವೆಂಬ ಜನರ ಅಭಿಮತ ಹುಸಿಯಾಗುತ್ತಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದ ಹಿನ್ನೆಲೆಯಲ್ಲಿ ಬಂಡೆ ಬೆಟ್ಟಗಳಲ್ಲೂ ಸಾಹಿತ್ಯ ಗಂಧ ಹೊಮ್ಮುವಂತಾಗಿರುವುದು ಸಾಕ್ಷಿಯಲ್ಲದೇ ಮತ್ತೇನು? ನಾನು ನೀನೆಂಬ ಭೇದಭಾವ ಮರೆತು ಕನ್ನಡಮ್ಮನ ಮಕ್ಕಳೆಲ್ಲ ಒಂದೆಂಬ ಭಾವದಿಂದೊಡಗೂಡಿದ ಮನಸ್ಸಿಂದ ನಾಡಹಬ್ಬವನ್ನು ಸಂಭ್ರಮದಿ ಆಚರಿಸೋಣ ಬನ್ನಿ.
ಹೈದರನ ಕಪಟಕ್ಕೆ ಸಿಕ್ಕಿದ್ದ ಏಳು ಸುತ್ತಿನ ಕೋಟೆ ಹೆಮ್ಮೆಯಿಂದ ತಲೆಯೆತ್ತಿ ನಿಲ್ಲುತ್ತದೆ. ಕನ್ನಡಮ್ಮಗೆ ಜಯಘೋಷ ಹೇಳಲು ಸಜ್ಜಾಗುತ್ತದೆ. ಪ್ರತಿ ಸುತ್ತು ಒಂದು ಬಾರಿ ಜಯಘೋಷ ಹೇಳುತ್ತಿದ್ದರೆ ಏಳು ಬಾರಿ ಪ್ರತಿಧ್ವನಿಸುವಂತಾಗುವುದು. ಕಲ್ಲು ಕಲ್ಲೂ, ಸಾಹಿತ್ಯ ಕಂಪ ಸೂಸುತ್ತಿರೆ, ಕಲ್ಲು ಇದು ಬರೀ ನೀರ್ಜಿವವಲ್ಲ. ಕಲ್ಪನಾ ಗಣಿ. ಗಂಡು ಮೆಟ್ಟಿದ ನಾಡು ಚಿತ್ರದುರ್ಗದಲ್ಲಿ ಕನ್ನಡದ ಜಾತ್ರೆ ನಡೆಯುತ್ತಿರುವುದು ನಮ್ಮೆಲ್ಲರಿಗೂ ಹರ್ಷಾತೀತ. ಅದರಲ್ಲಿ ನಾವೆಲ್ಲರೂ ಪಾಲ್ಗೊಂಡು ಕನ್ನಡಕ್ಕೆ ನಮ್ಮ ಗೌರವಾಭಿಮಾನಗಳನ್ನು ಸಲ್ಲಿಸಿ ನಮ್ಮ ಹೊಣೆಗಾರಿಕೆಯನ್ನು ನಿಭಾಯಿಸೋಣ.
ನಮ್ಮದು ಬಯಲುಸೀಮೆಯಾದರೂ ಸಾಹಿತ್ಯದಲ್ಲಿ ಸಮೃದ್ಧವಾಗಿರುವುದರಲ್ಲಿ ಸಂದೇಯವಿಲ್ಲ. ಸಾಹಿತ್ಯಾಸಕ್ತರು, ಸಾಹಿತ್ಯ, ಪೋಷಕರಿಗೆ ಬರವಿಲ್ಲವೆನ್ನುವುದು ಸಮ್ಮೇಳನಕ್ಕೆ ದೊರೆಯುತ್ತಿರುವ ಪ್ರೋತ್ಸಾಹದಲ್ಲಿಯೇ ತಿಳಿಯಬಹುದಾಗಿದೆ. "ಮಾಡಿದವಗೆ ನೀಡು ಭಿಕ್ಷೆ" ಎನ್ನುವ ಹಟ್ಟಿ ತಿಪ್ಪೇಶನ ನಾಡಲ್ಲಿರುವ ನಮ್ಮ ಸಾಹಿತ್ಯ ಕೃಷಿಕರಿಗೆ ತಕ್ಕ ಪ್ರೋತ್ಸಾಹವೆಂಬ ಮಳೆ, ಪ್ರತಿಫಲವೆಂಬ ಬೆಳೆ ಸಿಗುವುದೆಂಬ ಆಶಾಭಾವನೆ ಹೊತ್ತವರಿಗೆ ನಿರಾಶೆಯಾಗಲಾರದು.
ನಮ್ಮ ಅರಿವೆ ಗುರುವಾದಾಗ ಪ್ರತಿ ಕಣದಲ್ಲವೂ ತಿಳಿದು ಕೊಳ್ಳುವ ವಿಚಾರ ಹೊಂದಿರುವಾಗ ಜಗತ್ತೇ ನಮ್ಮ ಅಧ್ಯಯನ ಪುಸ್ತಕವಾಗಿದೆ. ಇದರ ಅಧ್ಯಯನ ನಿತ್ಯ ನಿರಂತರ. ಅಧ್ಯಾಯಗಳು ಮುಗಿದಂತೆಲ್ಲಾ ಅನುಭವ ಹೆಚ್ಚುತ್ತದೆ.
ಮೌನದಲಿ ಮಾತಿದೆ,
ಮಾತಿನಲಿ ಸಮರವಿದೆ,
ನಗುವಿನಲೂ ಅಳುವಿದೆ,
ಅಳುವಿನಲಿ ತೊಳಲಿದೆ,
ಕನಸಲೂ ಕಲ್ಪನೆಯಿದೆ,
ಕಲ್ಪನೆಯಲಿ ಇಂಗಿತವಿದೆ
ಭಾವದಲೂ ಭವ್ಯತೆಯಿದೆ
ಭವ್ಯತೆಯಲಿ ಬಯಕೆಯಿದೆ.
ನಮ್ಮೊಳಗೊಂದು ಅಂತರವಿದೆ
ಅಂತರದಲಿ ಸಂಬಂಧವಿದೆ
ಕನಸಿಗೂ ಅರ್ಥವೊಂದಿದೆ
ಆ ಕನಸಲೂ ಕಂಡಿದೆ
75ರ ಸಾಹಿತ್ಯ ಸಮ್ಮೇಳನದ ಹಿರಿಮೆಯ
ಚಿತ್ರದುರ್ಗದ ಸೋಜಿಗದ ಐಸಿರಿಯ!
ಅತಿಥಿ ದೇವೋಭವವೆನ್ನುವ ನಾಡಲ್ಲಿ "ಸಾಹಿತ್ಯ"ದ ಅತಿಥಿಯನ್ನು ಸತ್ಕರಿಸೋಣ ಬನ್ನಿ.
- ಕೆ.ಟಿ. ಜ್ಯೋತ್ಸ್ನ
97313 55520

2 ಕಾಮೆಂಟ್‌ಗಳು:

  1. ದುರ್ಗದ ಮಣ್ಣಿಗೆ ದಿಗ್ಗಜರ ಆಶೀರ್ವಾದ

    ಕನ್ನಡದ ಮೊದಲ ಕವಿಯತ್ರಿ " ಅಕ್ಕಮಹಾದೇವಿ"
    ಕನ್ನಡದ ರತ್ನತ್ರಯರು "ಪಂಪ,ಪೊನ್ನ,ರನ್ನ"
    ಕನ್ನಡದ ಪ್ರಕೃತಿಯ ಆರಾಧ್ಯ ಕವಿ "ಕುವೆಂಪು"
    ಕುವೆಂಪು ರವರ ಗುರುಗಳು "ತಳುಕಿನ ವೆಂಕಣ್ಣಯ್ಯ ಜನ್ಮವೆತ್ತಿದ ನಾಡು,
    ದುರ್ಗದ ಚಾರಿತ್ರಿಕ ಕೃತಿಗಳಿಂದ ಮೆರೆದ "ತ.ರಾ.ಸು "
    ಕನ್ನಡದ ಮೊದಲ ನವೋದಯ ಕವಿಯತ್ರಿ "ಬೆಳೆಗೆರೆ ಜಾನಕಮ್ಮ "
    ಮೊದಲಾದ ಕವಿಗಳ ಆಶೀರ್ವಾದದಿಂದ ಕನ್ನಡ ಭಾಷೆಯು ಆಲದ ಮರದಂತೆ
    ಪಸರಿಸುತ್ತಿದೆ.

    ಬನ್ನಿ ಈ ಆಲದ ಮರವನ್ನು ಹೆಮ್ಮರವಾಗಿಸೋಣ .
    ಮರಳು ಗಾಡಿನಲ್ಲಿ ಬಾಯಾರಿದವನಿಗೆ ಸಿಕ್ಕ ಓಯಾಸಿಸ್ ನಂತೆ
    ಬಂಜರು ಭೂಮಿಯಲ್ಲಿ ಸಾಹಿತ್ಯದ ಅಮೃತಸವಿಯನ್ನು ಸವಿಯೋಣ,
    ನಮ್ಮ ನಿಮ್ಮೆಲ್ಲರ ಗಂಡು ಮೆಟ್ಟಿದ ನಾಡಾದ ಚಿತ್ರದುರ್ಗದ 75 ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಮೃತ ಮಹೋತ್ಸವಕ್ಕೆ ಕನ್ನಡ ಭಾಷೆಯನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ಆದರದ ಸ್ವಾಗತ.

    ದುರ್ಗದ ಮಡಿಲ ಕೂಸು.

    ಸಂತೋಷ್.ಹೆಚ್/ಸೀತಾಲಕ್ಷ್ಮಿನಾರಾಯಣರಾವ್
    ಪೋನ್ :9945373325
    ಪರಶುರಾಮಪುರ ಗ್ರಾ ಪಂಚಾಯತಿ ಗಣಕಯಂತ್ರ ನಿರ್ವಾಹಕರು.

    ಪ್ರತ್ಯುತ್ತರಅಳಿಸಿ
  2. ಸಾಹಿತ್ಯ ಎಂಥವರನ್ನೂ ಆಕರ್ಷಿಸುತ್ತೆ.,
    ನಾವೆಲ್ಲಾ ಸೇರಿ ನಮ್ಮ ಜಿಲ್ಲೆಯ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
    (ಅಮೃತ ಸಮ್ಮೇಳನ)ವನ್ನು ಅದ್ಧೂರಿಯಾಗಿ ನೆರವೇರಿಸೋಣ ಗೆಳೆಯರೇ....

    ಧನ್ಯವಾದಗಳು... ಸಂತೋಷ್

    ಪ್ರತ್ಯುತ್ತರಅಳಿಸಿ