
ಬುಧವಾರ, ಜನವರಿ 28, 2009
ದುರ್ಗದ ಜನತೆಗೊಂದು ಕಹಿಸುದ್ದಿ

ಸೋಮವಾರ, ಜನವರಿ 26, 2009
ದುರ್ಗದ ಸಾಹಿತಿಗಳು.- 1
ಮಕ್ಕಳಿಗಾಗಿ ಕತೆ, ಕವನ ಬರೆದಿರುವ ತಿಪ್ಪೇರುದ್ರಪ್ಪ ಅವರ ಕವನವೊಂದನ್ನು ಮಹಾರಾಷ್ಟ್ರದ ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ. ನಿಂಗಣ್ಣನ ಎಲೆಕ್ಷನ್ ಡ್ಯೂಟಿ, 30 ವಿಡಂಬನೆಗಳು ಎಂಬ ಹಾಸ್ಯ ಲೇಖನ ಸಂಕಲನ, ಕಾಡಿನ ಕ್ರಿಕೆಟ್, ಪುಟ್ಟನ ಕಾನ್ವೆಂಟ್, ಹಕ್ಕಿಗಳು ಎಂಬ ಮಕ್ಕಳ ಕವನ ಸಂಕಲನ, ಬಡವ ಬದುಕಿದ ಎಂಬ ನಾಟಕ ಹಾಗೂ ದ್ವಿತಿಯ ಪಿ.ಯು.ಸಿ. ತರಗತಿಗಾಗಿ ರಾಜ್ಯಶಾಸ್ತ್ರ ಪಠ್ಯಪುಸ್ತಕ ರಚಿಸಿ ಪ್ರಕಟಿಸಿದ್ದಾರೆ.
ಕಲ್ಲರಳಿ ಹೂವಾಗಿ... : ಚಲನಚಿತ್ರ
ಈ ಭೂಮಿ, ಈ ನಾಡು - ಕಲ್ಲರಳಿ ಹೂವಾಗಿ
ಕಲ್ಲರಳಿ... ಹೂವಾಗಿ.... - ಕಲ್ಲರಳಿ ಹೂವಾಗಿ
ನಿನ್ನ ನೆನಪಿನಲಿ.. ನನ್ನ ಬದುಕಿರಲಿ.. - ಕಲ್ಲರಳಿ ಹೂವಾಗಿ
ನನ್ನ ನೆಚ್ಚಿನ ಕೋಟೆಯ - ಕಲ್ಲರಳಿ ಹೂವಾಗಿ
"ನಾಗರಹಾವು" ಚಲನಚಿತ್ರದಲ್ಲಿ "ಚಿತ್ರದುರ್ಗ"
ಕನ್ನಡ ನಾಡಿನ ವೀರರಮಣಿಯ - ನಾಗರಹಾವು.
ಹಾವಿನ ದ್ವೇಷ - ನಾಗರಹಾವು
ಬಾರೆ.. ಬಾರೇ... ಚಂದದ ಚೆಲುವಿನ ತಾರೆ.. - ನಾಗರಹಾವು
ಸಂಗಮ ಸಂಗಮ - ನಾಗರಹಾವು
ಶುಕ್ರವಾರ, ಜನವರಿ 23, 2009
ನಮ್ಮೂರ ಗಾಂಧಿ..!

ಬೆಳಗೆರೆ ಕೃಷ್ಣಶಾಸ್ತ್ರಿಯೆಂದೊಡನೆ ನಮ್ಮ ಸೀಮೆಯ ಜನಮನಗಳಲ್ಲಿ ಥಟ್ಟನೆ ಮೂಡುವ ಚಿತ್ರ; ನಿಷ್ಕಲ್ಮಷ ನಗುವಿನ ಶ್ವೇತಧಾರಿಯಾದ ತೊಂಬತ್ತರ ಯುವಕನ ಚಿತ್ರ ! ತಮ್ಮ ಈ ಇಳಿವಯಸ್ಸಿನಲ್ಲಿಯೂ ಪಾದರಸದಂತೆ ಓಡಾಡಿಕೊಂಡು ಸಾಮಾಜಿಕ, ಆಧ್ಯಾತ್ಮಿಕ, ಜಾನಪದ ಹಾಗು ಸಾಹಿತ್ಯ ಕ್ಷೇತ್ರಗಳಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿರುವ ಶಾಸ್ತ್ರಿಗಳು ಇಂದಿನ ಯುವಕರಿಗೆ ಆದರ್ಶಪ್ರಾಯರು.ಬೆಳಗೆರೆ ಕೃಷ್ಣಶಾಸ್ತ್ರಿಗಳು 22ರ ಮೇ 1918 ಬೆಳಗೆರೆಯಲ್ಲಿ ಜನಿಸಿದರು. ಇವರ ತಂದೆಯಾದಂತ ಶ್ರೀ ಚಂದ್ರಶೇಖರ ಶಾಸ್ತ್ರಿಗಳು ಆಶುಕವಿಯೂ, ಸಂಸ್ಕೃತ ವಿದ್ವಾಂಸರು, ವೇದ ವಿದ್ಯ ಪಾರಂಗತರಾಗಿದ್ದರು ಆ ವಿದ್ಯೆಯನ್ನು ಹೊಟ್ಟೆಪಾಡಿಗೆ ಬಳಿಸಿಕೊಳ್ಳಬಾರದು! ಎಂಬ ಮನೋಭಾವದ ವಿಶಿಷ್ಠ ವ್ಯಕ್ತಿ! ಇಂಥ ಸಂಧರ್ಭದಲ್ಲಿ, ಇವರ ತಾಯಿ ಶ್ರೀಮತಿ ಅನ್ನಪೂರ್ಣಮ್ಮನವರು ಮನೆತನದ ವಿದ್ಯೆ ಆಯುರ್ವೇದದಿಂದ ಮನೆವೈದ್ಯ ಮಾಡಿ ಇಡಿ ಮನೆಯ ನಿರ್ವಹಣೆಯನ್ನು ನಿಭಾಯಿಸಿದರು. ಕ್ಷೀರಸಾಗರ ಕಾವ್ಯನಾಮ ಖ್ಯಾತಿಯ ನಾಟಕಕಾರ ಹಾಗು ಗಣಿತ ಪ್ರಾಧ್ಯಾಪಕರಾದ ಸೀತಾರಾಮ ಶಾಸ್ತ್ರಿಗಳು ಇವರ ಹಿರಿಯ ಸಹೊದರರು. ನವೋದಯ ಸಾಹಿತ್ಯದ ಪ್ರಥಮ ಕವಿಯತ್ರಿಯೆಂದೆ ಖ್ಯಾತರಾದ ಬೆಳಗೆರೆ ಜಾನಕಮ್ಮ ಹಿರಿಯ ಸಹೊದರಿ ಹಾಗು ಮತ್ತೋರ್ವ ಕತೆಗಾರ್ತಿಯಾದಂತ ಬೆಳಗೆರೆ ಪಾರ್ವತಮ್ಮನವರು ಇವರ ಕಿರಿಯ ಸಹೊದರಿ. ಹೀಗೆ ಸಾಹಿತ್ಯಿಕ ಕುಟುಂಬದಿಂದ ಬಂದ ಕೃಷ್ಣಶಾಸ್ತ್ರಿಗಳು, ಸಹಜವಾಗಿಯೇ ಸಾಹಿತ್ಯದೆಡೆಗೆ ಆಕರ್ಷಿತರಾದರ ಕೃಷ್ಣಶಾಸ್ತ್ರಿಗಳು ಮುಂದೆ ಹಲವಾರು ಅಪರೂಪದ ಕೃತಿಗಳನ್ನು ಸಾರಸತ್ವಲೋಕಕ್ಕೆ ಅರ್ಪಸಿದರು.'ತುಂಬಿ' ಇವರ ಪ್ರಥಮ ಕವನ ಸಂಕಲನವೆನ್ನ ಬಹುದು. ಇವರು ಬರೆದ ನಾಟಕಗಳೆಂದರೆ ಹಳ್ಳಿಚಿತ್ರ, ಹಳ್ಳಿಮೇಷ್ಟ್ರು, ಆಕಸ್ಮಿಕ, ಪಾಶುಪತಾಸ್ತ್ರ, ಏಕಲವ್ಯ, ಸೋಹ್ರಾಬ್ - ರುಸ್ತುಂ, ತೆನಾಲಿ ರಾಮ, ವಿಚಿತ್ರ ಸಾಮ್ರಾಜ್ಯಂ, ಅಲ್ಲಾವುದ್ದೀನ್, ಹಿಂಗೂ ಮಾಡಿ ನೋಡ್ರೀ. ಆಕಾಶದಗಲ ನಗುವಿನ ಅವಧೂತ, ಸಾಹಿಗಳ ಸ್ಮೃತಿ (ಬೇಂದ್ರ, ವಿ.ಸೀ.,ಡಿ.ವಿ.ಜಿ.,ದೇವುಡು ಅವರೊಂದಿಗಿನ ನೆನಪುಗಳು), ಮರೆಯಾಲಾದೀತ್ತೇ?, ಎಲೆ ಮರೆಯ ಆಲರು (ನಿರೂಪಣೆ: ನ.ರವಿಕುಮಾರ್) ಇವರ ಕೃತಿಗಳು . ಡಬ್ಲ್ಯ.ಸಿ.ಸ್ಯಾಂಡರ್ಸ್ರ 'ಇನ್ನರ್ ವಾಯ್ಸ್' ಕೃತಿಯನ್ನು 'ಅಂತರ್ ಧ್ವನಿ'ಯಾಗಿ ಕನ್ನಡಕ್ಕೆ ಭಾವಾನುವಾದ ಮಾಡಿದ್ದಾರೆ.ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಹೈಸ್ಕೂಲ್ ಓದುತ್ತಿರುವಾಗ ಮಹಾತ್ಮ ಗಾಂಧಿಯವರ ಗಾಢಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ ಚಳುವಳಿಯಲ್ಲಿಯೂ ಭಾಗವಹಿಸಿದರು. 1926 ರಲ್ಲಿ ಗಾಂಧಿಜಿಯವರು ಮೈಸೂರು ಸಂಸ್ಥಾನದ ಅತಿಥಿಯಾಗಿ ಬಂದಾಗ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದ್ದಾರೆ. ಗಾಂಧಿವಾದದ ಅಪ್ಪಟ ಅಭಿಮಾನಿಯಾದ ಇವರು ಸಂಕಲ್ಪದಂತೆ ಇಂದಿಗೂ ಖಾದಿಧಾರಿಯಾಗಿಯೆ ಉಳಿದಿದ್ದಾರೆ. ಆಚಾರ್ಯ ವಿನೋಬಾ ಅವರ ಭೂದಾನ ಚಳುವಳಿಯಲ್ಲಿಯೂ ಭಾಗವಹಿಸಿದ್ದಾರೆ.ಮೈಸೂರುನಲ್ಲಿ ಬಿ.ಇಡಿ. ಪದವಿಯನ್ನು ಮುಗಿಸಿದ ನಂತರ ಹೆಗ್ಗೆರೆ, ಮೀರಾಸಾಬಿಹಳ್ಳಿ, ದೇವನೂರು, ಚಿತ್ರದುರ್ಗ,ಕಳಸಾ ಮುಂತಾದ ಕಡೆಗಳಲ್ಲಿ ಉಪಾದ್ಯಾಯ ವೃತ್ತಿಯನ್ನು ನಿರ್ವಹಿಸಿದ್ದಾರೆ. ಚಳ್ಳಕೆರೆ ತಾಲ್ಲೂಕಿನ ಮೀರಾಸಾಬಿಹಳ್ಳಿ, ಹೆಗ್ಗೆರೆ ಗ್ರಾಮಗಳಲ್ಲಿ ಸ್ಥಳಿಯ ಸಂಘನೆಯಿಂದ ಸರ್ಕಾರದ ನೆರವಿಲ್ಲದೆ ಶಾಲಾ ಕಟ್ಟಡ, ಆಸ್ಪತ್ರೆ, ಬಯಲು ರಂಗಮಂದಿರ, ಶಿವಾಲಯ, ಶಿಕ್ಷಕರ ವಸತಿ ಗೃಹ, ರಸ್ತೆಗಳ ನಿರ್ಮಾಣ ಇವೆಲ್ಲವೂ ಇವರ ಸಾಮಾಜಿಕ ಸೇವೆಗೆ ಸಾಕ್ಷಿ .ಸಣ್ಣವಯಸಿನಲ್ಲಿಯೇ ಗರ್ಭಿಣಿ ಪತ್ನಿ ಹಾಗು ಮಗುನನ್ನು ಕಳೆದುಕೊಂಡ ಇವರು ಸಹಜವಾಗಿಯೆ ಆಧ್ಯಾತ್ಮದೆಡೆಗೆ ಆಕರ್ಷಿತರಾದರು. ಎರಡನೇ ಮದುವೆಯಾಗಲು ಇವರ ಸಹೊದರಿಯಾದ ಪಾರ್ವತಮ್ಮನವರ ಒತ್ತಡ ತಾಳಲಾರೆದೆ ತಮ್ಮ ಎಲ್ಲಾ ಹಲ್ಲುಗಳನ್ನು ಕೀಳಿಸಿಕೊಂಡು ಬಂದಿದ್ದರಂತೆ! ತಿರುವಣ್ಣಾಮಲೈನ ಶ್ರೀ ರಮಣ ಮಹರ್ಷಿಗಳ ದಿವ್ಯ ಸನ್ನಿಧಿಯಲ್ಲಿ ಬಹುದಿನದ ಕ್ಲೇಷ ಕಳೆದು ಒಂದು ಬಗೆಯ ಅಲೌಕಿಕ ಅನುಭಾವಕ್ಕೆ ಒಳಗಾದರು. ಆಶ್ರಮದಲ್ಲೆ ಕೆಲ ಕಾಲವಿದ್ದು ಆಧ್ಯಾತ್ಮಿಕ ಸಾದನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮುಂದೆ ಆನಂದ ಆಶ್ರಮದ ಶ್ರೀ ರಾಮದಾಸರು, ಹೃಷಿಕೇಶದ ಸ್ವಾಮಿ ಶಿವಾನಂದರು, ಬಾಗೂರಿನ ಶ್ರೀ ಶರಣಮ್ಮ , ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮಿಗಳು (ತಿರುಕ), ಶ್ರೀ ಜಿಡ್ಡು ಕೃಷ್ಣಮೂರ್ತಿ ಮೊದಲಾದ ಸತ್ಪರುಷರೊಂದಿಗೆ ಒಡನಾಟವಿಟ್ಟು ಕೊಂಡಿದ್ದರು. ಸಿದ್ಧಪುರುಷರು, ಅವಧೂತರು ಆದಂತ ಶ್ರೀ ಮುಕೂಂದೂರು ಸ್ವಾಮಿಗಳೊಂದಿಗೆ ಇದ್ದ ಇವರ ಒಡನಾಟಕ್ಕೆ ಅಕ್ಷರ ರೂಪು ಕೊಟ್ಟು ಯೆಗ್ದಾಗೆಲ್ಲಾ ಐತೆ ಕೃತಿರೂಪದಲ್ಲಿ ಹೊರ ತಂದಿರುತ್ತಾರೆ. ಈ ಕೃತಿಯು ಹಿಂದಿ, ಇಂಗ್ಲೀಷ್, ತೆಲಗು, ಮರಾಠಿ ಭಾಷೆಗಳಲ್ಲಿ ಅನುವಾದಗೊಂಡಿದೆ. ಪ್ರಸ್ತುತ ಸಂಸ್ಕೃತ, ಮಲೆಯಾಳಿ, ಬಂಗಾಳಿ, ತಮಿಳು, ಒರಿಯಾ, ಭಾಷೆಗಳಲ್ಲಿ ಅನುವಾದಕ್ಕೆ ಅಣಿಯಾಗುತ್ತಿದೆ. ನಾಡಿನ ಜಾನಪದ ಕ್ಷೇತ್ರಕ್ಕೆ ಇವರ ಸೇವ ಅಪಾರ. ಜಾನಪದ ಕಂಪ್ಯೂಟರ್, ನಾಡೋಜಾ ಹಾಗು ರಾಜ್ಯೋತ್ಸವ ಪ್ರಶಸ್ತಿ ವಿಜೇತ ' ಜನಪದ ಸಿರಿ' ಸಿರಿಯಜ್ಜಿಯನ್ನು ಪರಿಚಯಿಸಿದ ಹಿರಿಮೆ ಇವರದು. ಟಿಮೇಟಿ ಕ್ರಿಸ್ಟೋಫರ್ , ಕೆ.ಹಿಲ್. ಫೀಟರ್ ಜೆ.ಕ್ಲಾವುಸ್, ಆಂಡ್ರೂಸ್ ಮುಂತಾದವರಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕೃಷ್ಣಶಾಸ್ತ್ರಿಗಳು ನೆರವಾಗಿದ್ದಾರೆ. ದೇಶಿಯ ಸಂಶೋಧಕರಾದ ಸನ್ಮಾನ್ಯ ಡಾ.ತಿ.ನಂ.ಶಂಕರನಾರಯಣ, ಢಾ.ಆರ್.ಶೇಷ ಶಾಸ್ತ್ರಿ, ಡಾ.ಕೃಷ್ಣಮೂರ್ತಿ ಹನೂರು, ಡಾ.ಎಂ.ಜಿ.ಈಶ್ವರಪ್ಪ ಮೊದಲಾದ ಜಾನಪದ ಸಂಶೋಧನೆಗೆ ಇವರಿದ್ದ ಕುಟೀರವೇ ಸ್ಪೂರ್ತಿಯ ನೆಲೆಯಾಗಿದೆ. ಜಾನಪದ ಜಂಗಮ ಡಾ.ಎಸ್.ಕೆ.ಕರೀಂಖಾನ್ ಅವರನ್ನು ಬೆಳಗೆರೆ ನಾರಯಣಪುರದಲ್ಲಿ ಗ್ರಾಮಸ್ಥರವತಿಯಿಂದ ಸನ್ಮಾನಿಸಿದ್ದಾರೆ.ಹಳ್ಳಿಚಿತ್ರ ನಾಟಕಕ್ಕೆ - ಶ್ರೇಷ್ಟ ನಾಟಕ ಪ್ರಶಸ್ತಿ, ಕೇಂದ್ರ ಸರ್ಕಾರದ ರಾಷ್ಟ್ರೀಯ ನಾಟಕ ಪುರಸ್ಕಾರ. ಮೈಸೂರು ರಾಜ್ಯ ಸರ್ಕಾರದಿಂದ ಉತ್ತಮ ಶಿಕ್ಷಕ ಪ್ರಶಸ್ತಿ (1970), ಕೇಂದ್ರ ಸರ್ಕಾರದಿಂದ ಉತ್ತಮ ಶಿಕ್ಷಕ ಪ್ರಶಸ್ತಿ (1971), ಚಿತ್ರದುರ್ಗದಲ್ಲಿ ನಡೆದ ಧರ್ಮ ಸಮ್ಮೇಳನದಲ್ಲಿ ಸೇವಾರತ್ನ ಪ್ರಶಸ್ತಿ. ಚಿಕ್ಕಮಗಳೂರಿನ ಅಳಾಸಿಂಗಚಾರ್ ಪ್ರಶಸ್ತಿ. 1996ರಲ್ಲಿ ನಡೆದ ಚಿತ್ರದುರ್ಗ ಜಿಲ್ಲ ಸಾಹಿತ್ಯ ಸಮ್ಮೇಳನದ ಅಧ್ಕ್ಷತೆಯನ್ನೂ ವಹಿಸಿದ್ದಾರೆ.ಚಿತ್ರದುರ್ಗದ ಅಭಿಮಾನಿಗಳು ಚಿನ್ಮಯಿ ಎಂಬ ಸಂಭಾವನ ಗ್ರಂಥವನ್ನು ಅರ್ಪಸಿದ್ದಾರೆ. ಅರ್ಪಣೆ - ಚಿಕ್ಕಮಗಳೂರಿನ ಅಭಿಮಾನಿಗಳು ಅರ್ಪಸಿದ ಸಂಭಾವಾನ ಗ್ರಂಥ.ಬಬಬಬಬೆಳಗೆರೆ ಕೃಷ್ಣಶಾಸ್ತ್ರಿಗಳ ತಂದೆಯಾದ ಶ್ರೀ ಚಂದ್ರಶೇಖರ ಶಾಸ್ತ್ರಿಗಳವರ ಆಶಯದಂತೆ ಹಾಗು ಅಣ್ಣ ಸೀತಾರಾಮಶಾಸ್ತ್ರಿಗಳವರ ಆರ್ಥಿಕ ಸಹಕಾರದಿಂದ 1967ರಲ್ಲಿ , ತಮ್ಮ ಹಿರಿಯರಿಂದ ಬಳುವಳಿಯಾಗಿ ಬಂದಂತ ಮನೆಯಲ್ಲಿಯೇ ಶ್ರೀ ಶಾರದ ಮಂದಿರವನ್ನು ವಿದ್ಯುಕ್ತವಾಗಿ ಪ್ರಾರಂಭಿಸಿದರು. ಗ್ರಾಮೀಣ ಅಲಕ್ಷಿತ ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ನೀಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಸರ್ಕಾರದ ಯಾವುದೇ ನೆರವಿಲ್ಲದೇ ಆರಂಭಗೊಂಡ ಈ ಸಂಸ್ಥೆ ಇಂದಿಗೂ 750 ವಿದ್ಯಾರ್ಥಗಳಿಗೆ ಯಾವುದೆ ರೀತಿಯ ಸೇವಾ ಶುಲ್ಕವಿಲ್ಲದೆ ಉಚಿತ ವಿದ್ಯೆ,ಉಚಿತ ಊಟ , ಉಚಿತ ವಸತಿ ಕಲ್ಪಸಿಕೊಡಲಾಗುತ್ತಿದೆ. ಇಂದು ಶಿಕ್ಷಣ ವ್ಯವಸ್ಥೆ ಒಂದು ಉದ್ಯಮವಾಗಿರುವಾಗ, ಬೆಳಗೆರೆ ಕೃಷ್ಣಶಾಸ್ತ್ರಿಗಳು ಏಕವ್ಯಕ್ತಿ ಸಂಸ್ಥೆಯಾಗಿ ಯಾವುಧೇ ರೀತಿಯ ಫಲಾಪೇಕ್ಷೆಯಿಲ್ಲದೆ ನಾಲ್ಕು ದಶಕಗಳಿಂದ ಅವಿರತವಾಗಿ ದುಡಿಯುತ್ತಿದ್ದಾರೆ. ಎರಡು ಬಾರಿ ಹೃದಯಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು ಎಂದು ಬತ್ತದ ಚೈತನ್ಯದ ಚಿಲುಮೆಯ ಈ ಶಾಸ್ತ್ರಿಗಳು! ಆದರ್ಶಯುತವಾಗಿ ಬದುಕಿದವರು ಬಹಳಷ್ಟು ಮಂದಿ ಬದುಕೇ ಆದರ್ಶವಾಗಿಸಿಕೊಂಡವರು ವಿರಳ ಅಂತಹರ ಸಾಲಿಗೆ ಈ ಬಿಳಿಯ ಬಟ್ಟೆಯ ಜಂಗಮ ಸೇರುತ್ತಾರೆ. ಇಂತಹ ಶಾಸ್ತ್ರಿಗಳಿಗೆ ಕೊನೆಗೂ ಡಾಕ್ಟರೇಟ್ ಗೌರವ ದಕ್ಕಿದೆ. ಪ್ರಶಸ್ತಿ-ಪುರಸ್ಕಾರಗಳೇನಿದ್ದರು ನಮ್ಮ ಮುಚ್ಚಟೆಯೇ ಹೊರತು ಈ ನಿರ್ಮೋಹಿ ಸಂತನ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವುದಿಲ್ಲ. ಈ ಮಹಾನ್ ಚೇತನಕ್ಕೆ ಭಗವಂತ ಇನ್ನೂ ಹೆಚ್ಚಿನ ಆರೋಗ್ಯ ಕರುಣಿಸಲಿ ,ಇದೇ ಅವರೆಲ್ಲ ಅಭಿಮಾನಿಗಳ ಹಾರೈಕೆ.
ಚಿತ್ರದುರ್ಗದ 'ಸಿರಿ'ಯಜ್ಜಿ
ಕನ್ನಡ ಸಾಹಿತ್ಯ ಪ್ರಪಂಚದ ಅನರ್ಘ್ಯರತ್ನ ಜಾನಪದ ಸಾಹಿತ್ಯ ಇಂತಹ ಜಾನಪದ ರತ್ನಗಳ ಅಸಾಧಾರಣ ಸ್ಮರಣಶಕ್ತಿಯ ಜನಪದಸಿರಿ ಸಿರಿಯಜ್ಜಿ. ಚಳ್ಳಕೆರೆ ತಾಲ್ಲೂಕು ಯಲಗಟ್ಟೆ ಗೊಲ್ಲರಹಟ್ಟಿ ಅಜ್ಜಿಯ ಹುಟ್ಟೂರು. ಈರಪ್ಪ-ಕಾಡಮ್ಮ ದಂಪತಿಗಳ ಮಗಳು. ವಿದ್ಯಾಭ್ಯಾಸದಿಂದ ವಂಚಿತಳಾದರೂ ಸಹ ವಿದ್ವತ್ತನ ಗಣಿಯಾಗಿ ಹತ್ತು ಸಾವಿರ ಪದಗಳ ಒಡತಿಯಾಗಿ ಜನಮನ ಗೆದ್ದಿದ್ದಾರೆ.
ಈ ಜಿಲ್ಲೆಯ ಕಾಡುಗೊಲ್ಲರ ಜನಾಂಗವು ನಮ್ಮ ಸಂಸ್ಕೃತಿ ಜೀವಂತ ಪಳೆಯುಳಕೆ, ಇವರ ಸಂಪ್ರದಾಯ, ನಂಬಿಕೆ ಮತ್ತು ಆಚರಣೆಯಿಂದಾಗಿ ತಮ್ಮದೇ ಆದ ವೈಶಿಷ್ಟವನ್ನು ಮೆರಿದಿದ್ದಾರೆ. ಅಂತಹ ಹಬ್ಬಹರಿದಿನಗಳ ಆಚರಣೆ, ಮದುವೆಯ ಸಮಾರಂಭಗಳಲ್ಲಿ ಸಿರಿಯಜ್ಜಿಯ ಹಾಡು ಗಂಗೆಯಂತೆ ಅಲೆಅಲೆಯಾಗಿ ಹರಿದುಬರುತ್ತೆ.
ಬೆಳಗೆರೆ ಕೃಷ್ಣಶಾಸ್ತ್ರಿಗಳ ಪ್ರೊತ್ಸಹಾದಿಂದಾಗಿ, ಸಿರಿಯಜ್ಜಿಯ ಜನಪದ ಹಾಡುಗಳ ಭಂಡಾರವೇ ನಮ್ಮ ಮುಂದಿದೆ ."ಮಹಸತಿ ಕಾಟವ್ವ”, ”ಕತ್ತಲೆ ದಾರಿದೂರ” ಎನ್ನುವ ಕತನಗೀತೆಗಳು ಜನಮನ ಗೆದ್ದಿವೆ. ಗೊಲ್ಲ ಜನಾಂಗದ ದೇವರ ಹಾಡುಗಳು ಜನರನ್ನು ಭಕ್ತಿಪರವಶರನ್ನಾಗಿಸಿದೆ. ಮಾಜಿ ಮುಖ್ಯಮಂತ್ರಿ ಗುಂಡುರಾಯರು ‘ಜನಪದಸಿರಿ’ ಎಂಬ ಬಿರುದನ್ನಿತ್ತು ಸನ್ಮಾನಿಸಿದ್ದಾರೆ. ನಾಡಿನ ಪ್ರತಿಷ್ಟಿತ ಪ್ರಶಸ್ತಿಯಾದಂತಹ ನಾಡೋಜ ಪ್ರಶಸ್ತಿಯನ್ನು ಕನ್ನಡ ವಿಶ್ವವಿದ್ಯಾಲಯ ನೀಡಿ ಗೌರವಿಸಿದೆ. ಹಾಗೂ ಕರ್ನಾಟಕ ಜನಪದ ಅಕಾಡೆಮಿಯ ಜಾನಪದಶ್ರೀ ಎಂಬ ಬಿರುದನ್ನು ನೀಡಿ ಪುರಸ್ಕರಿಸಿದೆ. ಅನೇಕ ಸಂಘ-ಸಂಸ್ಥೆಗಳು, ಜನಪದ ಮೇಳ, ಮಠಮಾನ್ಯಗಳಿಂದ ಪ್ರಶಸ್ತಿ ಪಡೆದ ಸಿರಿಯಜ್ಜಿ ‘ನಡೆದಾಡುವ ಜಾನಪದಕೋಶ’ ವಾಗಿದ್ದಾರೆ.
ನಮ್ಮ ಚಿತ್ರದುರ್ಗ ನಿಜವಾದ ಜಾನಪದ ಸಿರಿ ಎಂದರೆ ಸಿರಿಯಜ್ಜಿ. ಹತ್ತು ಸಾವಿರ ಜಾನಪದ ಗೀತೆಗಳನ್ನು ಕೇವಲ ತನ್ನ ನೆನಪಿನ ಶಕ್ತಿಯಿಂದಲೇ ಹಾಡುವ, ಅನಕ್ಷರಸ್ಥ ವಯೋವೃದ್ದೆ ನಮ್ಮ "ಸಿರಿಯಜ್ಜಿ".
- ಆರ್.ರಾಘವೇಂದ್ರ, ಚಳ್ಳಕೆರೆ.
+91 9916822102
ಗುರುವಾರ, ಜನವರಿ 22, 2009
ಸಾಹಿತ್ಯ ಸಮ್ಮೇಳನವ ಆಚರಿಸುವ ಬನ್ನಿ....

ಭಾನುವಾರ, ಜನವರಿ 18, 2009
ದುರ್ಗದ ಪಿಲ್ಲೋಲಾವಾ (Pillolava at Chitradurga District)
ಸಮುದ್ರದಲ್ಲಿ ಉಂಟಾದ ಜ್ವಾಲಾಮುಖಿಯಿಂದ ಹೊರ ಬಿದ್ದ ಶಿಲಾರಸ ನೀರಿನ ಮೇಲೆ ತಣಿದಾಗ ದಿಂಬಿನಾಕಾರದ ರೂಪ ಪಡೆದುಕೊಂಡವು. ಈ ಅವಶೇಷವನ್ನು ಪಿಲ್ಲೋಲಾವಾ ರಚನೆಗಳೆಂದು ಕರೆಯುತ್ತಾರೆ.
ಚಿತ್ರದುರ್ಗದಿಂದ ಸುಮಾರು 16 ಕಿ.ಮೀ (ಬೆಂಗಳೂರಿನಿಂದ ಸುಮಾರು 180 ಕಿ.ಮೀ.)ದೂರದಲ್ಲಿರುವ ಮರಡಿಹಳ್ಳಿಯಲ್ಲಿ ಈ ಪಿಲ್ಲೋ ಲಾವಾ ಶಿಲೆಗಳಿವೆ. ಈಗ ಆರಂಭದ ಪ್ರಶ್ನೆಗೆ ಉತ್ತರ ಸಿಕ್ಕಿರಬಹುದು.
ಭೂಗರ್ಭಶಾಸ್ತ್ರದ ಪ್ರಕಾರ ಚಿತ್ರದುರ್ಗದ ಬಹುಭಾಗ ಸುಮಾರು 2500 ಮಿಲಿಯನ್ ವರ್ಷಗಳ ಹಿಂದೆ ಸಮುದ್ರದಿಂದ ಬಹುಭಾಗ ಆವೃತ್ತವಾಗಿತ್ತು. ಈ ಅವಧಿಯಲ್ಲಿ ಸಂಭವಿಸಿದ ಜ್ವಾಲಾಮುಖಿಯೊಂದರಿಂದ ದಿಂಬಿನಾಕಾರದ ರಚನೆಗಳು ರೂಪ ಪಡೆದವು.
ಭಾರತದಲ್ಲಿ ಒರಿಸ್ಸಾದ ಕಿಯೋಂಜರ್ ಜಿಲ್ಲೆಯ ನೊಮಿರಾದಲ್ಲಿ ಶಿಲಾ ರಚನೆಗಳನ್ನು ಕಾಣಬಹುದು.
ಚಿತ್ರದುರ್ಗ ಹಾಗೂ ಸುತ್ತಮುತ್ತಲ ಜಿಲ್ಲೆಯ ಬಹುಭಾಗ ಇತಿಹಾಸದ ಬಗ್ಗೆ ಈ ಶಿಲೆಗಳು ಬೆಳಕು ಚೆಲ್ಲಿವೆ. ದುರಾದೃಷ್ಟವೆಂದರೆ ಈ ಶಿಲಾರಚನೆಗಳು ಇರುವ ಬಗ್ಗೆ ಅನೇಕರಿಗೆ ಮಾಹಿತಿ ಇಲ್ಲ. ಇಲ್ಲಿನ ಶಿಲೆಗಳು ಮರಡಿಹಳ್ಳಿಯ ಮನೆಗಳ ಮುಂದೆ ಬಿದ್ದಿವೆ. ಕಟ್ಟೆ, ಮನೆ ನಿರ್ಮಾಣಕ್ಕೆ ಬಳಕೆಯಾಗಿವೆ. ಗುಡ್ಡದ ಮೇಲಿರುವ ದೊಡ್ಡ ಗಾತ್ರದ ಶಿಲೆಗಳ ಮೇಲೆ ಪ್ರೇಮಿಗಳ ಹೆಸರುಗಳು ರಾರಾಜಿಸುತ್ತಿವೆ.
ಪ್ರಪಂಚದ ಕೆಲವೇ ದೇಶಗಳಲ್ಲಿ ಇಂಥ ಶಿಲಾರಚನೆಗಳು ನೋಡಲು ಸಿಗುತ್ತವೆ ಎನ್ನುತ್ತಾರೆ ಭೂಗರ್ಭಶಾಸ್ತ್ರ ವಿಜ್ಞಾನಿಗಳು. ಇತ್ತೀಚೆಗೆ ಕಾಂಗೋದ ವಿಜ್ಞಾನಿಗಳೂ ಇಲ್ಲಿನ ಶಿಲೆಗಳ ಮಾದರಿ ಸಂಗ್ರಹಿಸಿ ಒಯ್ದಿದ್ದಾರೆ. ಇದರ ಕೆಲ ಸ್ಯಾಂಪಲ್ ಇಂಗ್ಲೆಂಡ್ ವಸ್ತು ಸಂಗ್ರಹಾಲಯದಲ್ಲೂ ಇಡಲಾಗಿದೆ. ಇಂಥ ವಿಶೇಷವಿರುವ ಈ ಸ್ಥಳ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
(ಈ ಮಾಹಿತಿ ಹಾಗೂ ಚಿತ್ರಗಳನ್ನು ಎಸ್.ಜೆ.ಎಂ. ಮಹಾವಿದ್ಯಾಲಯದಲ್ಲಿ ಸಸ್ಯಶಾಸ್ತ್ರ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಂ.ಸುಷ್ಮಾರಾಣಿ ಕಳಿಸಿಕೊಟ್ಟಿದ್ದಾರೆ. )
ಶನಿವಾರ, ಜನವರಿ 17, 2009
ಶುಕ್ರವಾರ, ಜನವರಿ 16, 2009
ಸಡಗರದ ಅಮೃತ ಮಹೋತ್ಸವ...

ಸೋಮವಾರ, ಜನವರಿ 12, 2009
ದುರ್ಗದಲ್ಲಿ 'ಅಮೃತ'..!
ಶನಿವಾರ, ಜನವರಿ 10, 2009
ಸಂಭ್ರಮ ಸಮ್ಮೇಳನ
ಶುಕ್ರವಾರ, ಜನವರಿ 9, 2009
ಕನ್ನಡ ಸಾಹಿತ್ಯ ಸಮ್ಮೇಳನದ ಅಗತ್ಯತೆ..........
- ಕನ್ನಡ ಭಾಷೆಯು ಇಂದು ಭಾಷಾ ಸ್ಥಾನಮಾನ ಪಡೆದುಕೊಂಡಿದೆ. ಅದರ ಸದ್ಬಳಕೆಯ ದೃಷ್ಟಿಯಲ್ಲಿ ಕನ್ನಡದ ಬೆಳವಣಿಗೆ ಇಂತಹ ಸಮ್ಮೇಳನಗಳು ಒಂದು ವೇದಿಕೆಯಾಗುವ ಎಲ್ಲಾ ಅವಕಾಶಗಳಿವೆ.
- ಕನ್ನಡ ಭಾಷೆಯು ಅತಿ ಪ್ರಾಚೀನವಾದ ದ್ರಾವಿಡ ಭಾಷೆಯಾಗಿದೆ. ಇದು ಇಂದು ಕರ್ನಾಟಕದ ಅಧಿಕೃತ ಭಾಷೆ. ಇದರ ಬೆಳವಣಿಗೆಗೆ ಅಗಾಧವಾಗಿದೆ. ಇದು ಕರ್ನಾಟಕದ ಸಾಂಸ್ಕೃತಿಕ ಪ್ರತಿನಿಧಿಯೂ ಹೌದು. ಹೀಗಿರುವಾದ ಕನ್ನಡ ಭಾಷೆಯ ಸಾಹಿತ್ಯ ವಿಚಾರ ಮಂಥನಕ್ಕೆ ಸಮ್ಮೇಳನಗಳು ಪ್ರಮುಖ ವೇದಿಕೆಯಾಗುವುದರಲ್ಲಿ ಅನುಮಾನವಿಲ್ಲ.
- ಯಾವ ಭಾಷೆಗಳಾಗಲಿ ಅಳಿವು ಎಂಬುದು ಇಲ್ಲ. ಆದರೆ ಬದಲಾವಣೆಯು ಸಹಜ. ಈ ಬದಲಾಗುವ ಜಗತ್ತಿನಲ್ಲಿ ಇತರ ಭಾಷೆಗಳಂತೆ ಕನ್ನಡ ಭಾಷೆಯು ಸಹ ಬದಲಾಗುತ್ತಿರುವ ಪ್ರವೃತ್ತಿಗೆ ಒಳಗಾಗುತ್ತದೆ. ಇಂತಹ ಪರಿವರ್ತನೆಯ ಸಮಯದಿ ಭಾಷಾ ಬದಲಾವಣೆಗಳ ಆಗು-ಹೋಗುಗಳನ್ನು ಚರ್ಚಿಸಲು ಅನುವು ಮಾಡಿಕೊಡುವುದು ಇಂತಹ ಸಮ್ಮೇಳನಗಳ ಹೊಣೆಗಾರಿಕೆ.
- ಭಾವನೆಗಳನ್ನು ವ್ಯಕ್ತಪಡಿಸಲು ಮಾತೃಭಾಷೆಗಿಂತ ಬೇರೆ ಭಾಷೆ ಪರಿಣಾಮಕಾರಿಯಲ್ಲ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಹಾಗೆಯೇ ಭಾಷೆಯ ಬೆಳವಣಿಗೆಗೆ ಅಲ್ಲಿನ ಪ್ರಾಥಮಿಕ ಶಿಕ್ಷಣವು ಮಾತೃಭಾಷೆಯಲ್ಲಿರಬೇಕು ಎಂಬುದು ಪ್ರಚಲಿತವಾಗಿರುವ ವಿಷಯ. ಇಂತಹ ಸೂಕ್ಷ್ಮ ಸಂಗತಿಗಳ ಗಹನವಾದ ಚರ್ಚೆ. ಸಾಧಕ-ಭಾದಕಗಳ ಕುರಿತು ಚಿಂತಿಸಲು ಇಂತಹ ಸಮ್ಮೇಳನಗಳು ಮಾರ್ಗದರ್ಶಿಯಾಗಬೇಕು.
- ಕನ್ನಡ ಸಾಹಿತ್ಯ ಅತ್ಯುನ್ನತವಾದ 7 ಜ್ಞಾನಪೀಠ ಪ್ರಶಸ್ತ್ರಿಯನ್ನು ತನ್ನ ಮುಡಿಗೇರಿಸಿಕೊಂಡಿರುವ ಭಾಷೆ, ಇಂತಹ ಭಾಷೆಯಲ್ಲಿರುವ ಉತ್ತಮವಾಗಿ ಸಾಹಿತ್ಯಗಳನ್ನು ಕನ್ನಡಾಸಕ್ತರಿಗೆ ಪರಿಚಯಿಸುವ ಹಾಗೂ ವಿಶ್ವದ್ಯಾಂತ ಸಾರುವ ಕೆಲಸಗಳನ್ನು ಈ ಸಮ್ಮೇಳನಗಳು ಮಾಡಬೇಕಿದೆ.
- ಕನ್ನಡನಾಡು ವಿಭಿನ್ನ ಸಂಸ್ಕೃತಿಗಳ ನೆಲೆಬೀಡು. ಇಂತಹ ಕರುನಾಡಿನ ಹತ್ತು ಹಲವು ಸಾಂಸ್ಕೃತಿಕತೆಯನ್ನು ಇಂದು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ಕೆಲಸ ಮಾಡಬೇಕಿದೆ.
- ಕನ್ನಡ ನಾಡು ಕಲೆಗಳ ತವರೂರು. ಇಲ್ಲಿನ ಕಲೆಗಳು ವಿಶ್ವವಿಖ್ಯಾತ ಇಂತಹ ಕಲೆಗಳ ಉಳಿವು, ಪುನರುತ್ಥಾನ, ಬೆಳಸುವ ಜವಬ್ದಾರಿಯು ಸಹ ಇಂತಹ ಸಮ್ಮೇಳನಗಳ ಮೇಲೆ ಇದೆ.
ಈ ಮೇಲಿನ ಅಂಶಗಳೊಡನೆ ಹತ್ತು ಹಲವು ಅಂಶಗಳು ಕನ್ನಡ ಸಾಹಿತ್ಯ ಸಮ್ಮೇಳನಗಳ ಅಗತ್ಯತೆಯನ್ನು ಒತ್ತಿ ಹೇಳುತ್ತದೆ. ಹಲವಾರು ಬಂಡಾಯ ಸಮ್ಮೇಳನಗಳ ನಡುವೆ 74 ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದ ಕನ್ನಡ ಸಾಹಿತ್ಯ ಪರಿಷತ್ ಇಂದು 75 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುತ್ತದೆ.
ಈ ಕೆಳಕಂಡ ಅಂಶಗಳನ್ನೊಳಗೊಂಡ ಸಮ್ಮೇಳನದ ಅಗತ್ಯತೆ ಅಷ್ಟಾಗಿ ಬೇಕಿರುವುದಿಲ್ಲ.
- ಇಂದಿನ ಸಮ್ಮೇಳನಗಳು ಆಯಾಯ ಆಯೋಜಕರ ಪ್ರತಿಷ್ಟತೆಯ ಪಣವಾಗಿ ರೂಪಿತವಾಗುತ್ತಿದೆ.
- ಇಂದು ಕನ್ನಡದ ಹೆಸರಿನಲ್ಲಿ, ಸಮ್ಮೇಳನದ ಹೆಸರಿನಲ್ಲಿ, ಜಾತ್ರೆ ಸ್ವರೂಪದ ಹೆಸರಿನಲ್ಲಿ ಸಮ್ಮೇಳನಗಳು ನಡೆಯುತ್ತಿದ್ದು, ಪಕ್ಷಪಾತಿಗಳ ಮೇಲುಗೈ ಕಂಡು ಬರುತ್ತಿದೆ.
- ಕನ್ನಡ ಭಾಷೆಯನ್ನು ಮೆರೆಸಬೇಕಾದ ಸಮ್ಮೇಳನಗಳಲ್ಲಿ ಇಂದು ವ್ಯಕ್ತಿಗಳನ್ನು ಮೆರೆಸುವ ಪ್ರವೃತ್ತಿ ಹೆಚ್ಚಾಗಿ ಕಂಡು ಬರುತ್ತಿದೆ. ಇದರಿಂದ ಸಮ್ಮೇಳನದ ಮೂಲ ಉದ್ದೇಶವೇ ಮರೆಯಾಗಿದೆ.
- ಸಮ್ಮೇಳನದ ಅಧ್ಯಕ್ಷತೆಯ ಆಯ್ಕೆಯಿಂದ ಹತ್ತು ಹಲವು ಗೋಷ್ಟಿಗಳಲ್ಲಿ ಪಾಲ್ಗೊಳ್ಳುವಿಕೆಗಾಗಿ ನಡೆಯುವ ಲಾಬಿ ಇಂದಿನ ಕೀಳು ಮಟ್ಟದ ರಾಜಕಾರಣವನ್ನು ನಾಚಿಸುವಂತಿದೆ.
- ಇಂದಿನ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯದ ಗಂಧವೇ ಮರೆಯಾಗಿದೆ. ಇಂತಹ ಸಮ್ಮೇಳನಗಳು ಬೇಕು ಬೇಡಗಳ ಸ್ಥಿತಿಯನ್ನು ನೆನೆದರೆ ಸಮ್ಮೇಳನಗಳು ಅಗತ್ಯವಿಲ್ಲ ಎಂಬುದರಲ್ಲಿ ಎರಡು ಮಾತಿಲ್ಲ.
- ಇಂದಿನ ಸಮ್ಮೇಳನದಲ್ಲಿ ಎಲ್ಲರೂ ಪಾಲ್ಗೊಳ್ಳುವುದು ಅಗತ್ಯ. ಆದರೆ ಇಂದು ಕೇವಲ ಗುಂಪುಗಾರಿಕೆ ಕಂಡು ಬರುತ್ತಿರುವ ಇಂದಿನ ಸಮ್ಮೇಳನಗಳಲ್ಲಿ ನಿಜವಾದ ಆಸಕ್ತರು ಹಾಗೂ ಕನ್ನಡ ಪರವಿರುವವರು ದೂರ ಉಳಿದಿರುವುದು ಬೇಸರದ ಸಂಗತಿ ಹೀಗಿರುವಾಗ ಸಮ್ಮೇಳನ ಬೇಕೆ?
ಹೀಗೆ ಹತ್ತು ಹಲವು ಬೇಕು ಬೇಡಗಳ ನಡುವೆ ನಡೆಯುತ್ತಿರುವ 75ನೇ ಕನ್ನಡ ಸಾಹಿತ್ಯ ಸಮ್ಮೇಳನವು ಏಕೆ ಬೇಕು? ಏಕೆ ಬೇಡ ಎಂಬ ಬಗ್ಗೆ ವಿಸ್ತೃತವಾದ ಚರ್ಚೆಯು ನಡೆಯಬೇಕಿದೆ. ಹಾಗೂ ಪ್ರತಿಯೊಬ್ಬ ಕನ್ನಡಿಗರು ಮನೆಮನೆಯ ಮನದ ಹಬ್ಬವಾಗಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಚರಿಸುವ ಬಗ್ಗೆ ಜಾಗೃತಿಯನ್ನು ಕನ್ನಡ ಸಾಹಿತ್ಯ ಸಮ್ಮೇಳನಗಳು ಮಾಡಬೇಕಿದೆ.
- ಯ.ಮ.ಹೇಮಂತಕುಮಾರ್
ಅಂಬಾ ಪ್ರಕಾಶನ
ಕೆ.ಕೆ.ರಸ್ತೆ, ಯಳಂದೂರು- 571441
ಚಾಮರಾಜನಗರ ಜಿಲ್ಲೆ.
ದೂರವಾಣಿ: 08226-240196, 9448596343
ಗುರುವಾರ, ಜನವರಿ 8, 2009
ಕನ್ನಡ ಸಾಹಿತ್ಯ ಸಮ್ಮೇಳನ ಸಂಭ್ರಮ - 75
ಪರ್ಯಾಯ ಸಮ್ಮೇಳನ ಇಲ್ಲ..!

ಬುಧವಾರ, ಜನವರಿ 7, 2009
ಪ್ರಮುಖ ಸಾಹಿತ್ಯ ಸಮ್ಮೇಳನಗಳು...

ಪ್ರಥಮ ಸಾಹಿತ್ಯ ಸಮ್ಮೇಳನ 1915ರಲ್ಲಿ ಬೆಂಗಳೂರಿನಲ್ಲಿ ನಡೆಯಿತು. ಅಂದಿನ ಸಮ್ಮೇಳನವು ಇಂದಿನಂತೆ ದೊಡ್ಡ ಜಾತ್ರೆಯಾಗಿರಲಿಲ್ಲ. ಎಚ್.ವಿ.ನಂಜುಂಡಯ್ಯ ರವರು ಅಧ್ಯಕ್ಷರಾಗಿದ್ದರು. 1916ರಲ್ಲಿ ಬೆಂಗಳೂರು ಹಾಗೂ 1917ರಲ್ಲಿ ಮೈಸೂರಿನಲ್ಲಿ ನಡೆದ ಸಮ್ಮೇಳನಕ್ಕೂ ಎಚ್.ವಿ.ನಂಜುಂಡಯ್ಯ ರವರು ಅಧ್ಯಕ್ಷರಾಗಿದ್ದುದು ಮೊದಲ ಸಮ್ಮೇಳನದ ಬಳುವಳಿ.
ಎಸ್.ನಿಜಲಿಂಗಪ್ಪರವರ ಶ್ವೇತಭವನ

ಸೋಮವಾರ, ಜನವರಿ 5, 2009
75ನೇ ಸಾಹಿತ್ಯ ಸಮ್ಮೇಳನ ಮತ್ತು ಡಾ. ಎಲ್.ಬಸವರಾಜು
ಇಲ್ಲಿ ಸಾಹಿತ್ಯಕ್ಕಂತೂ ಬರವಿಲ್ಲ...

ಭಾನುವಾರ, ಜನವರಿ 4, 2009
ಬಯಲು ಸೀಮೆಯಲ್ಲಿ ಸಾಹಿತ್ಯ ಜಾತ್ರೆ
