ಸೋಮವಾರ, ಡಿಸೆಂಬರ್ 29, 2008

ಯಾರನ್ನೂ ಮರೆಯಬೇಡಿ..

ಸಮ್ಮೇಳನದ ಸಿದ್ಧತೆ ಭರದಿಂದ ಸಾಗುತ್ತಿವೆ. ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಿದೆ ಎಂಬ ಅಸಮಾಧಾನದಿಂದ ಕೆಲ ಮಿತ್ರರು ಪರ್ಯಾಯ ಸಮ್ಮೇಳನ ಮಾಡಲು ನಿರ್ಧರಿಸಿದ್ದಾರೆ. ನಾವೂ ಕೂಡ ಬರಗೂರು, ದೇವನೂರು ಅವರ ಹೆಸರನ್ನು ಪ್ರಸ್ತಾಪಿಸಿ ಇವರ ಆಯ್ಕೆಯಾಗಬೇಕೆಂಬ ಹಂಬಲ ವ್ಯಕ್ತಪಡಿಸಿದ್ದೆವು. ಇರಲಿ. ಪ್ರತಿಭಟನೆ ಇರಬೇಕು. ಅದನ್ನು ಜಿಲ್ಲೆಯ ಕೆಲ ಮಿತ್ರರು ದಾಖಲಿಸುತ್ತಿದ್ದಾರೆ.

ಈ ನಡುವೆ ಚಿತ್ರದುರ್ಗದ ಸಮ್ಮೇಳನದ ಸಮಿತಿಗಳು ಚುರುಕಾಗಿ ಕೆಲಸ ಮಾಡುತ್ತಿರುವ ಬಗ್ಗೆ ವರ್ತಮಾನವೂ ಬಂದಿದೆ. ಸಮ್ಮೇಳನದಲ್ಲಿ ಜಿಲ್ಲೆಯಲ್ಲಿರುವ, ಹಾಗೂ ಜಿಲ್ಲೆಯವರಾದ ಪ್ರತಿಭಾವಂತರನ್ನು, ಗಣ್ಯರನ್ನು ಸನ್ಮಾನಿಸಲು ಕೆಲವರನ್ನು ಆಯ್ಕೆ ಮಾಡಿರುವುದಾಗಿ ಕೇಳಿಬಂದಿದೆ.
ಪತ್ರಕರ್ತ ಬಿ.ವಿ.ವೈಕುಂಠರಾಜು, ಲೇಖಕಿ ಕೆ.ಆರ್.ಸಂಧ್ಯಾರೆಡ್ಡಿ, ನಾಟಕಕಾರ ಜಿ.ಜೆ.ಹರಿಜಿತ್, ಲೇಖಕಿ ನೇಮಿಚಂದ್ರ, ನಟ, ಲೇಖಕ ಎಚ್.ಜಿ.ಸೋಮಶೇಖರರಾವ್, ಇವರ ಸಹೋದರ ನಟ ದತ್ತಾತ್ರೇಯ, ಮಾವಿನಕೆರೆ ರಂಗನಾಥನ್ ಸೇರಿದಂತೆ ಅನೇಕರಿದ್ದಾರೆ.
ಇಲ್ಲಿ ಉಲ್ಲೇಖಿಸಿದ ಕೆಲ ಗಣ್ಯರ ಹೆಸರೇ ಇಲ್ಲವೆಂಬ ಸುದ್ದಿ ಕಿವಿಗೆ ಬಿದಿದ್ದೆ. ಹೇಗೋ ಮಾಡಿ ಮುಗಿಸುವ ತರಾತುರಿಯಲ್ಲಿ ಸಮ್ಮೇಳನದ ಸಮಿತಿ ಜಿಲ್ಲೆಯ ಕೆಲ ಹಿರಿಯ ಚೇತನಗಳನ್ನು ಮರೆತು ಅನರ್ಥ ಮಾಡದೇ ಹೋದರೆ ಸಾಕು!

10 ಕಾಮೆಂಟ್‌ಗಳು:

  1. ಕನ್ನಡ ಸಾಹಿತ್ಯ ಸಮ್ಮೇಳದ ಬಗ್ಗೆ ಸಮಗ್ರ ಮಾಹಿತಿಯನ್ನು ಜನತೆಗೆ ತಿಳಿಸ ಹೊರಟಿರುವ ತಮ್ಮ ಪ್ರಯತ್ನ ನಿಜಕ್ಕೂ ಶ್ಲಾಘನೀಯ.ಈ ದಾರಿಯಲ್ಲಿ ಯಶಸ್ಸು ನಿಮ್ಮದಾಗಲೆಂಬ ಹಾರೈಕೆ ನಿಮ್ಮೊಂದಿಗೆ ಸದಾ ..........

    ಪ್ರತ್ಯುತ್ತರಅಳಿಸಿ
  2. ಪ್ರಿಯರೆ ನಮ್ಮ ಸರ್ಕಾರ ಬೆಂಗಳೂರು ಉತ್ಸವದಂತಹ ಅನ್ಯ ಸ೦ಸ್ಕ್ರುತಿ
    ಉದ್ದಾರಕ್ಕೆ ೪ ಕೋಟಿ ನೀಡುತ್ತದೆ , ಆದರೆ ನಮ್ಮ ನಾಡಿನ ಮಧ್ಯದ ಭಾಗವಾಗಿರುವ ಬಯಲು ಸೀಮೆ ಚಿತ್ರದುರ್ಗದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ೨ ಕೋಟಿ ಕೊಡಲು ತಿಣುಕುತ್ತಿದೆ
    ನಮ್ಮ ನಾಡಿನ ನಮ್ಮ ಭಾಷ ಸಮ್ಮೇಳನಕ್ಕೆ ನಮಗೆ ತಾತ್ಸಾರ?
    ಏಕೆ ಹೀಗೆ?
    ----------------- ಮದ್ದಿಹಳ್ಳಿ ಪರಮೇಶ್

    ಪ್ರತ್ಯುತ್ತರಅಳಿಸಿ
  3. ಗಂಡು ಮೆಟ್ಟಿದ ನಾಡು ವೀರ ಮದಕರಿ, ವೀರ ವನೆತೆ ಓಬವ್ವ ಜೀವ ತಳೆದ ಐತಿಹಾಸಿಕ ಕೋಟೆಗಳ ನಗರಿಯಾದ ಚಿತ್ರದುರ್ಗದಲ್ಲಿ ನೆಡೆಯಲಿರು ಕನ್ನಡಮ್ಮನ ಅದ್ದೂರಿ ಜಾತ್ರೆಗೆ ಕನ್ನಡ ಸಾಹಿತ್ಯ ಸಮ್ಮೇಳನದ ಸಮಗ್ರ ವಿವರಗಳನ್ನು ದುರ್ಗದ ಜನತೆಗೆ ತಿಳಿಸಹೊರಟಿರುವ ತಮ್ಮ ಪ್ರಯತ್ನಕ್ಕೆ ನಮ್ಮ ಶುಭಾಷಯಗಳು. ಹಲುವು ಕವಿಗಳ, ಲೇಖಕರ, ಬುದ್ದಿ ಜೀವಿಗಳ ಪ್ರಯತ್ನದಿಂದ ಮೊಟ್ಟ ಮೊದಲ ಬಾರಿಗೆ ಬಯಲು ಸೀಮೆಯಾದ ನಮ್ಮ ಚಿತ್ರದುರ್ಗದಲ್ಲಿ 75ನೇ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ದುರ್ಗದ ಮಣ್ಣಲ್ಲಿ ಜನಿಸಿದ ನಮಗೆ ಸಂತಸದ ವಿಷಯ.ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ನಾಡಿನ ಹಾಗೂ ನಮ್ಮ ಚಿತ್ರದುರ್ಗದ ಕವಿಗಳಿಗು, ಲೇಖಕರಿಗು,ಚಿತ್ರದುರ್ಗದ ಸಮಸ್ಥ ಜನೆತೆಗು ಶುಭಾವಾಗಲಿ. ನಾವೆಲ್ಲರು ಕನ್ನಡಮ್ಮನ ಜಾತ್ರೆಯಲ್ಲಿ ಪಾಲ್ಗೋಂಡು ಕನ್ನಡಮ್ಮನ ತೇರನ್ನು ಎಳೆಯೋಣ. ಕನ್ನಡವೇ ಸತ್ಯ...... ಜೈ ಕನ್ನಡಾಂಬೆ....
    ಜೈ ಹುಚ್ಚಂಗಮ್ಮ....... ಜಿ.ಟಿ. ಮಂಜುನಾಥ
    ಹಿರೇಮಧುರೆ

    ಪ್ರತ್ಯುತ್ತರಅಳಿಸಿ
  4. 75 ನೇ ಕನ್ನಡ ಸಾಹಿತ್ಯ ಸಮ್ಮೇಳನದ ರೂಪುರೇಷೆಗಳ ಸಮಗ್ರ ಮಾಹಿತಿಗಳನ್ನು ತಿಳಿಸಹೊರಟಿರುವ ತಮ್ಮ ಪ್ರಯತ್ನ ಗಮನಾರ್ಹ. ಪ್ರಥಮ ಬಾರಿಗೆ ಗಂಡು ಮೆಟ್ಟಿದನಾಡು ವೀರಮದಕರಿ ಜನಿಸಿದ ಮಣ್ಣಿನಲ್ಲಿ ಇಂದು ಕನ್ನಡದ ಜಾತ್ರೆ ನಡೆಯುತ್ತಿರುವುದು ದುರ್ಗದ ಮಣ್ಣಿನಲ್ಲಿ ಜನಿಸಿದ ನಮ್ಮೆಲ್ಲರಿಗೂ ಹರ್ಷಾತೀತ, ಅದರಲ್ಲಿ ನಾವೆಲ್ಲರೂ ಪಾಲ್ಗೊಂಡು ಕನ್ನಡಕ್ಕೆ ನಮ್ಮ ಗೌರವಾಭಿಮಾನವನ್ನು ಸಲ್ಲಿಸುವುದು ಆದ್ಯ ಕರ್ತವ್ಯ ಅದನ್ನು ನಿಭಾಯಿಸೋಣ. ಜೈ,ಕನ್ನಡಾಂಬೆ........ ಡಿ.ಟಿ.ವೆಂಕಟೇಶ ರೆಡ್ಡಿಹಳ್ಳಿ, ಗೋಪನಹಳ್ಳಿ ಅಂಚೆ. ಚಳ್ಳಕೆರೆತಾಲ್ಲೂಕು.

    ಪ್ರತ್ಯುತ್ತರಅಳಿಸಿ
  5. ಚಿತ್ರದುರ್ಗದ ಇತಿಹಾಸ ಮತ್ತು ಛಾಯಾಚಿತ್ರಗಳು ಬಹಳ ಅದ್ಬುತವಾಗಿವೆ ಇಂತಹ ಛಾಯಾಚಿತ್ರಗಳು ಮತ್ತು ಇತಿಹಾಸವನ್ನು ಬರೆದ ಮತ್ತು ಸಂಗ್ರಹಿಸಿದ ಎಲ್ಲಾ ಚಿತ್ತಾರ ದುರ್ಗದ ವೆಬ್ ಸೈಟ್ನ ರುವಾರಿಗಳಾದ ರಾಘವೇಂದ್ರ ಮತ್ತು ಭರತ್ ಕುಮಾರ್ ಇವರುಗಳಿಗೆ ಹೃದಯ ಪೂರಕ ವಂದನೆಗಳು



    ರಮೇಶ್ . ಸಿ
    ಹಿರೇಹಳ್ಳಿ
    ಚಳ್ಳಕೆರೆ ತಾಲ್ಲೂಕು
    ram.rameshc@yahoo.com
    ph:9740568645

    ಪ್ರತ್ಯುತ್ತರಅಳಿಸಿ
  6. 75ನೇ ಸಾಹಿತ್ಯ ಸಮ್ಮೇಳನದ ಅಹ್ವಾನ ಪತ್ರಿಕೆ ಪ್ರತಿ ಬಹಳ ಅದ್ಬುತವಾಗಿ ಮುಡಿಬಂದಿದೆ.ಚಿತ್ರದುರ್ಗದ ಇತಿಹಾಸ ಮತ್ತು ಛಾಯಾಚಿತ್ರಗಳು ತುಂಬಾ ಚೆನ್ನಾಗಿವೆ ಚಿತ್ರದುರ್ಗದ ಇತಿಸಾಸ ನನಗೆ ತುಂಬಾ ಇಷ್ಟವಾಗಿದೆ ಚಿತ್ರದುರ್ಗದ ಛಾಯಾಚಿತ್ರಗಳು ಒಂದಕ್ಕಿಂತ ಒಂದು ತುಂಬಾ ಚೆನ್ನಾಗಿವೆ ಇನ್ನೇಲ್ಲಾ ಸಂಗ್ರಹಿಸಿದ ರಾಘವೇಂದ್ರ ಮತ್ತು ಭರತ್ ಕುಮಾರ್ ಇವರಿಗೆ ನನ್ನ ತುಂಬು ಹೃದಯದ ವಂದನೆಗಳು.


    ಭಕ್ತ ಪ್ರಹ್ಲಾದ
    ನನ್ನಿವಾಳ (ಎತ್ತಿನಗೌಡರಹಟ್ಟಿ)
    ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ
    prahladaaghatty@yahoo.com
    papulib@yahoo.com
    nannivalabaktha@gmail.com
    mobil :9740894485
    9945996284
    9342290933

    ಪ್ರತ್ಯುತ್ತರಅಳಿಸಿ
  7. ಕನ್ನಡ ಸಾಹಿತ್ಯ ಸಮ್ಮೇಳದ ಬಗ್ಗೆ ಸಮಗ್ರ ಮಾಹಿತಿಯನ್ನು ಜನತೆಗೆ ತಿಳಿಸ ಹೊರಟಿರುವ ನನ್ನ ಪ್ರಯತ್ನ ನಿಜಕ್ಕೂ ಸಾರ್ಥಕ. ನಿಮ್ಮೆಲ್ಲರ ಸಹಕಾರದಿಂದ ಈ ದಾರಿಯಲ್ಲಿ ಯಶಸ್ಸು ನಮ್ಮದಾಗುವೆಂದು... ತಿಳಿದಿರುತ್ತೇನೆ.

    ಸಂತಸ, ಸಡಗರದಿ ಸಮ್ಮೇಳನದಲ್ಲಿ ಭಾಗವಹಿಸಿ ಜ್ಯೋತ್ಸ್ನರವರೇ

    ಪ್ರತ್ಯುತ್ತರಅಳಿಸಿ
  8. ಸರ್ಕಾರ ಸಮ್ಮೇಳನಕ್ಕೆ ಎರಡು ಕೋಟಿ ಅನುದಾನ ಬಿಡುಗಡೆ ಮಾಡಿದೆ. ಆದರೆ ನಮ್ಮ ದುರ್ಗದ ಮೇಲೆ ಜನರಿಗೆ ಇರುವ ಅಭಿಮಾನ... ಕಡಿಮೆಯೇ? ಅದರ ಹತ್ತರಷ್ಟು ದೇಣಿಗೆ ಸಮ್ಮೇಳನದ ಪಾಲಾಗಿದೆ.

    ಕನ್ನಡದ ಶಕ್ತಿ, ಕನ್ನಡ ಸಾಹಿತ್ಯದ ಭಕ್ತಿ ದುರ್ಗದ ಜನರನ್ನೂ ಮೂಕವಿಸ್ಮಿತರನ್ನಾಗಿಸಿದೆ..

    ಮದ್ದಿಹಳ್ಳಿ ಪರಮೇಶ್ ರವರೇ
    ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  9. ಧನ್ಯವಾದಗಳು.

    ಮೊಟ್ಟಮೊದಲ ಬಾರಿಗೆ ಬಯಲು ಸೀಮೆಯಾದ ನಮ್ಮ ಚಿತ್ರದುರ್ಗದಲ್ಲಿ 75ನೇ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ನಮಗೆ ಸಂತಸದ ವಿಷಯ. ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ನಾಡಿನ ಹಾಗೂ ನಮ್ಮ ಚಿತ್ರದುರ್ಗದ ಕವಿಗಳಿಗೂ, ಲೇಖಕರಿಗೂ,ಚಿತ್ರದುರ್ಗದ ಸಮಸ್ಥ ಜನೆತೆಗೂ ನಿಮ್ಮ ಶುಭಾಷಯ ಸಂದಾಯವಾಗಲಿ..

    ತಾಯಿ ಹುಚ್ಚಂಗಿ ಕೃಪೆಯಿಂದ.. ನಮ್ಮಮ್ಮ ಕನ್ನಡಮ್ಮನ ಅಮೃತ ಸಂತಸವನ್ನು ಹಂಚೋಣ ಮಂಜುನಾಥ್, ಹಿರೇಮಧುರೆ.. ಅಲ್ಲವೇ... ಪಾಲ್ಗೋಳ್ಳಿ.

    ಪ್ರತ್ಯುತ್ತರಅಳಿಸಿ
  10. ರಮೇಶ್ ಮತ್ತು ಪ್ರಹ್ಲಾದ್ ರವರೇ ಧನ್ಯವಾದಗಳು..

    ನಮ್ಮ ದುರ್ಗದ ಸಮ್ಮೇಳನಕ್ಕೆ ಇದು ನನ್ನ ಅಳಿಲು ಸೇವೆ.
    ಕನ್ನಡಮ್ಮನ ಸೇವೆಗೆ ಸದಾ ಸೇವಾನಿರತನಾಗಿರುತ್ತೇನೆ.

    ಪ್ರತ್ಯುತ್ತರಅಳಿಸಿ